HARSHA RAGA
HARSHA RAGA
Shipping calculated at checkout.
- Delivery in 7 business days after your order is confirmed and dispatched from our warehouse.
- We deliver across Pan India—metro cities, towns, and villages through trusted courier partners.
- Secure checkout with encrypted processing to keep your payment and personal details safe.
- Securely packed so your book arrives in excellent condition, ready to read.
ಪ್ರೀತಿ ಕೇಳುವುದು ಪ್ರೀತಿಯೊಂದನ್ನು ಮಾತ್ರ ಎಂಬ ಮಾತಿದೆ. ಆ ಮಾತನ್ನು ಸರಿಪಡಿಸುವ ಅನೇಕ ಪುಸಕ್ತಗಳು, ಚಲನಚಿತ್ರಗಳನ್ನು ಬಂದಿವೆ. ಆದರೆ ಅದೇ ನಿಸ್ವಾರ್ಥ ಪ್ರೀತಿಯಲ್ಲಿ ಅದರಲ್ಲೂ ಕುಟುಂಬದಲ್ಲೇ ಆಗುವ ತೊಂದರೆಗಳ ಜೊತೆ ಪ್ರೀತಿಯಲ್ಲಿ ಮೋಸ, ದ್ವೇಷ ಮತ್ತು ಕೋಪವೆಂಬುದು ಬೆಸೆದುಕೊಂಡರೆ ಮುಂದೆ ಏನಾಗುತ್ತದೆ, ಜೀವನದ ಜೊತೆ ಯಾವ ರೀತಿ ಪರಿಣಾಮಗಳು ಬೀರುತ್ತವೆ ಎಂಬುದನ್ನು ಲೇಖಕಿ ಫೌಝಿಯಾ ಸಲೀಂರವರು ತಮ್ಮ ಕಾದಂಬರಿಯಾದ 'ಹರ್ಷ ರಾಗ" (ಹೃದಯಾ... ಹೃದಯಾ)ದಲ್ಲಿ ಆದ್ಭುತವಾಗಿ ಸ್ವಾರಸ್ಯವಾಗಿ ಈ ಪುಸ್ತಕದಲ್ಲಿ ಪ್ರತಿಯೊಬ್ಬರಿಗೂ ಮನ ಮುಟ್ಟುವಂತೆ ತಿಳಿಸಿರುವುದೇ ಸೊಗಸಾಗಿದೆ. ಅದರಲ್ಲೂ ಪ್ರೀತಿಯಲ್ಲಿ ದ್ವೇಷ ಎಂಬುಂದು ಬಂದರೆ ಅದು ನಮ್ಮನ್ನೇ ಕೊನೆಗೊಳಿಸುತ್ತದೆ. ಪ್ರೀತಿ ಎಂಬುದನ್ನು ಬೆಳೆಸಿಕೊಂಡರೆ ಎಲ್ಲರನ್ನು ಒಂದಾಗಿಸಬಹುದು ಮತ್ತು ಎಂಥವರ ಹೃದಯವನ್ನು ಪ್ರೀತಿಯಿಂದ ಗೆಲ್ಲಬಹುದು ಎಂಬ ಶಕ್ತಿಯನ್ನು ನೀಡುತ್ತದೆ. ಈ ಕಾದಂಬರಿಯಲ್ಲಿ ಬರುವ ಹರ್ಷಿತ ಎಂಬ ಪಾತ್ರವು ಹಾಗೇ ಎಲ್ಲರನ್ನು ಪ್ರೀತಿಯಿಂದ ಗೆಲ್ಲುವಂತದ್ದು ಮತ್ತು ಕಲ್ಲಿನಂತಹ ಹೃದಯವನ್ನು ಕೂಡ ಕರಗಿಸುವಂತಹ ಮುಕ್ತ ಮತ್ತು ಪಟಪಟ ಮಾತನಾಡುವ ಸ್ವಭಾವ ಹೊಂದಿರುವ ಹಾಗೂ ಎಲ್ಲರಿಗೂ ಸಹಾಯ ಮಾಡುವ ಮನೋಭಾವ ಹೊಂದಿರುವ ಸುಂದರವಾದ ಹೆಣ್ಣು ಮಗಳು. ಇಂತಹ ಮುದ್ದಾದ ಹೆಣ್ಣು ಮಗಳ ಅತಿಯಾದ ಒಳ್ಳೆತನವು ಕೂಡ ಕೆಲವೊಮ್ಮೆ ತನ್ನ ನಂಬಿಕೆಯಿಂದಲೇ ಪ್ರೇಮದ ಸುಳಿಯಲ್ಲಿ ಸಿಲುಕಿ ಪರದಾಡುವ ರೀತಿ ಕೂಡ ಓದುಗರ ಮನಸ್ಸನ್ನು ಗೆಲ್ಲುವಂತೆ ಮಾಡುತ್ತದೆ. ಮತ್ತೊಂದು ಪ್ರಮುಖವಾದ ಪಾತ್ರವೆಂದರೆ ಹರ್ಷ ಎಂಬ ಪೋಲಿಸ್ ಅಧಿಕಾರಿಯ ಜೊತೆ ಬಿಸಿನೆಸ್ ಮ್ಯಾನ್ ಆಗಿ ಇರುವ ವ್ಯಕ್ತಿತ್ವ, ತುಂಬಾ ಕೋಪಿಷ್ಟನಾದರೂ ಸುಲಭವಾಗಿ ಯಾರನ್ನು ನಂಬುವುದಿಲ್ಲ. ಯಾವ ಹುಡುಗಿಯನ್ನು ಮದುವೆಯಾಗುವುದಿಲ್ಲ ಎನ್ನುವಂತಹ ನಿಷ್ಠಾವಂತ, ಖಡಕ್ ಅಧಿಕಾರಿ. ಆದರೆ ಈ ರೀತಿಯ ವ್ಯಕ್ತಿಯು ಕೂಡ ಯಾವ ರೀತಿ ಒಂದು ಹುಡುಗಿಯನ್ನು ಅತಿಯಾಗಿ ಪ್ರೀತಿಸುತ್ತಾನೆ ಎಂಬುದು ಈ ಕಾದಂಬರಿಯಲ್ಲಿ ಪ್ರಮುಖವಾಗಿದೆ. ಕಾದಂಬರಿಗಾರ್ತಿಯಾದ ಫೌಝಿಯಾ ಸಲೀಂ ರವರು ಬರೆದಿರುವ "ಹರ್ಷ ರಾಗ" ಸುಮಧುರವಾದ ಅನೇಕ ಹೃದಯಗಳನ್ನು ಬೆಸೆಯುವ ಒಂದು ಕೌಟುಂಬಿಕ ಕಾದಂಬರಿಯಾಗಿದೆ. ಇಲ್ಲಿ ಭಾವನೆಗಳನ್ನು ಒಳಗೊಂಡ ಮಧುರವಾದ ಪ್ರೀತಿಯ ಜೊತೆ, ಅಸೂಯೆ, ಹೊಟ್ಟೆ ಕಿಚ್ಚು, ಮನುಷ್ಯನ ದ್ವೇಷದ ಜೊತೆ ಕನಸುಗಳನ್ನು ಹೊತ್ತು ನಡೆಯುವ ತಾಯಿಯ ಪಾತ್ರ ಮನ ಮುಟ್ಟುತ್ತದೆ.