?? ಂದಿನ ಮಲೆನಾಡಿನ ಭವ್ಯತೆಯನ್ನು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನುರು ಹೆಗ್ಗಡಿತಿ ಮತ್ತು ಇತರ ಕೃತಿಗಳಲ್ಲಿ ಯತ್ತೇಚ್ಛವಾಗಿ ಕಾಣಸಿಗುವುದಾದರೂ, ?? ವರು ಕೃತಿಗಳಲ್ಲಿ ಕಟ್ಟಿಕೊಡುವ ಆ ಮಲೆನಾಡು ಈಗ ಕಾಣಸಿಗಲಾರದು. ಆದರೂ ಮಲೆನಾಡಿನ ದೃಗ್ ದಿಗಂತದ ದೃಶ್ಯ ಸಾದೃಶ ಯಾರನ್ನಾದರೂ ಸೆಳೆಯದಿರದು. ಕುವೆಂಪು ಆನಂತರದ ಬಹಳಷ್ಟು ಲೇಖಕರು ಕೂಡ `ಮೆರೆದ’ ಮಲೆನಾಡನ್ನ ಕೃತಿಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ?? ವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ?? ವರ ಕೃತಿಗಳಲ್ಲಿ ಬದುಕಿನ ಜೊತೆಜೊತೆಗೆನೆ ಜೀವ ಸಂಕುಲಗಳು, ?? ವುಗಳ ವೈಜ್ಞಾನಿಕ ವಿಶೇಷತೆಗಳನ್ನು ಕೂಡ ನಮಗೆ ತಿಳಿಸಿಕೊಡುತ್ತಾರೆ. ಆನಂತರ ಮಲೆನಾಡಿನ ಬಗ್ಗೆ ?? ದೆಷ್ಟೋ ಲೇಖಕರು ಬರೆದರೂ, ಇತ್ತೀಚೆಗೆ ಪ್ರಕಟಗೊಂಡ ಕೆಲವು ಕೃತಿಗಳಲ್ಲಿ ಗಿರಿಮನೆ ಶಾಮರಾವ್ ?? ವರ `ಕಾಫಿ ನಾಡಿನ ಕಿತ್ತಳೆ’ ಮತ್ತು ಬಿಳುಮನೆ ರಾಮದಾಸ್ ?? ವರ `ಮಲೆಯ ಪ್ರಬಂಧಗಳು’ ಮರೆಯಾದ ಮಲೆನಾಡಿನ ಒಳಹೊರಗನ್ನು ಪ್ರತಿಬಿಂಬಿಸಿದೆ. ಓದುಗನ ಕಣ್ಣಿನಲ್ಲಿ ಇಂದಿಗೂ ?? ಂದಿನ ಮಲೆನಾಡು ಇಲ್ಲಿ ಇನ್ನೂ ಸಮೃದ್ಧವಾಗಿಯೇ ಉಳಿದಿದೆ."


ಈ ರೀತಿಯಲ್ಲಿ ಮಲೆನಾಡನ್ನು ತೊರೆದು ಬಾಲ್ಯದ ನೆನಪುಗಳನ್ನು ಜೀವಂತವಾಗಿರಿಸಿಕೊಂಡು ಆಗಿನ ಮಲೆನಾಡಿನ ಸ್ಥಿತಿಗತಿ ಮತ್ತು ?? ಲ್ಲಿಯ ಬದುಕಿನ ಪುಟಗಳನ್ನು ಕಟ್ಟಿಕೊಡುವವರಲ್ಲಿ ಲಕ್ಷ್ಮಣ ಕೊಡಸೆಯವರನ್ನು ಹೆಸರಿಸಬಹುದು. `ಪಯಣ’ದಂತಹ ಕಾದಂಬರಿಯನ್ನು ಬರೆದ ಕೊಡಸೆಯವರು, `ಊರು- ಮನೆ’ಯ ಮೂಲಕ ಮಲೆನಾಡಿನ ಪರಿಸರವನ್ನು ನೆನಪಿನಲ್ಲಿ ಜಾಗೃತವಾಗಿರಿಕೊಂಡು ಲೇಖನಿಯಿಂದ ?? ಕ್ಷರಕ್ಕೆ ಇಳಿಸಿದ ಪ್ರಯತ್ನ ?? ವರದ್ದು. ?? ವರ ಇತ್ತೀಚಿನ ಕೃತಿ `?? ಪ್ಪನ ಪರಪಂಚ’ದಲ್ಲಿಯೂ ಮಲೆನಾಡಿನ ಬದುಕು, ಜೀವಸಂಕುಲಗಳ ವೈವಿಧ್ಯ ಮತ್ತು ಆಗಿನ ಮಲೆನಾಡಿನ ಪರಿಸರವನ್ನ ಬಹಳ ಸುಂದರವಾಗಿ ಬಳಸಿಕೊಂಡಿರುವುದು ಓದುಗನಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತದೆ.


`?? ಪ್ಪನ ಪರಪಂಚ’ ಒಂದು ಕಾದಂಬರಿಯಂತೆ ಕಂಡರೂ ?? ಲ್ಲಿರುವುದು ಒಂದು ವ್ಯಕ್ತಿ ಚಿತ್ರಣ ?? ಥವಾ `ಜೀವನಗಾಥೆ’. ಆದರೂ, ಇದನ್ನು ಒಂದು `ನಾನ್ ಫಿಕ್ಷನ್’ ?? ಂದರೆ ತಪ್ಪಾಗಲಾರದು.


ಈ ಕೃತಿಯಲ್ಲಿ ತಂದೆ ಮತ್ತು ಮಗನ ಬಾಂಧವ್ಯಕ್ಕಿಂತಲೂ, ತಂದೆ ಬದುಕಿಗಾಗಿ ಪಡುವ ಹೋರಾಟವನ್ನು `ವನ್ ಮ್ಯಾನ್ ಆರ್ಮಿ’ಯಾಗಿ ಚಿತ್ರಿಸುತ್ತಾ, ಮಗ ತಂದೆಯ `ನೆಗೆಟಿವ್’ಗಳನ್ನು ಹೇಳುವಂತೆ ಕಂಡರೂ, ?? ಲ್ಲಿ ಮಗನಿಗೆ ತಂದೆಯ ಮೇಲಿರುವ ?? ವ್ಯಕ್ತವಾದ ಪ್ರೀತಿಯನ್ನು ಸೂಕ್ಷ್ಮವಾಗಿ ತೆರೆದಿಡುತ್ತದೆ. ಇದರ ಜೊತೆಗೆ ಆಗಿನ ಒಟ್ಟು ವ್ಯವಸ್ಥೆಯನ್ನು, ಆ ಪರಿಸರದಲ್ಲಿ ಬೆಳೆದವರ ಮುಗ್ಧತೆಯನ್ನು ಕೂಡ ಪರಪಂಚದಲ್ಲಿ ದೃಶಿಸಿರುವುದು ಕಣ್ಣಿಗೆ ಕಟ್ಟಿದ ಹಾಗೆ ಮೂಡಿ ಬಂದಿದೆ. ?? ಡಿಕೆಯ ಸಿಪ್ಪೆ ಸುಲಿಯುತ್ತಲೇ ಮಕ್ಕಳ ಬಗ್ಗೆ ?? ಪಾರ ಪ್ರೀತಿಯಿರುವ ತಂದೆ, ಮಕ್ಕಳ ಓದಿನ ಬಗೆಯೂ ಕಾಳಜಿವಹಿಸಿ ಬದುಕು ಬದಲಿಸಿಕೊಳ್ಳುವ ನೋವು ಮತ್ತು ಪ್ರೀತಿಯಲ್ಲಿ ?? ವರ `ಭವಿಷ್ಯ’ವನ್ನು ರೂಪಿಸಿಕೊಡುವುದು ಮಕ್ಕಳ ಮೇಲಿನ ದ್ವೇಷದಿಂದಲ್ಲ, ಬರೀ ಪ್ರೀತಿಯಿಂದ ಮಾತ್ರ. ತಂದೆಯಾದವನ ಜವಾಬ್ದಾರಿ ಮತ್ತು ?? ದನ್ನು ಡಿಸ್ಚಾರ್ಜ್ಗೊಳಿಸುವ ಹಾದಿ ಸುಗಮವಾದುದಲ್ಲವಾದರೂ, ಈ ಕೃತಿಯಲ್ಲಿ ಇದ್ದದ್ದರಲ್ಲೇ ಪ್ರಪಂಚವನ್ನು ಕಂಡುಕೊಳ್ಳುವ ಗಟ್ಟಿ ಮಲೆನಾಡಿಗನೊಬ್ಬನ ಹೋರಾಟವಿದೆ.


ಆಯುಷ್ಯ ಏರುತ್ತಿದ್ದಂತೆ ಹುಟ್ಟಿಕೊಳ್ಳುವ ಜೀವನ ಪ್ರೀತಿ, ?? ಸಹಾಯಕತೆಯ ನಡುವೆಯೂ ಮನಸ್ಸಿಗೆ ಮೀರಿದ ಸಾಹಸದ ಕೆಲಸಗಳನ್ನು ಮಾಡಲು ಪ್ರೇರೇಪಿಸುವಂತೆ ಇಳಿವಯಸಿನಲ್ಲಿಯೂ `ನೀರಾ’ ತೆಗೆದು, ?? ದನ್ನು ಗಡಿಗೆಯಲ್ಲಿ ಹೊತ್ತುಕೊಂಡು ಹೋಗುವ ಕೆಲಸ ಸಾಮಾನ್ಯವಾದುದಲ್ಲ. ಇಲ್ಲಿ ಹಠಮಾರಿತನಕ್ಕಿಂತಲೂ ಸ್ವಾಭಿಮಾನವಿದೆ. ಮಕ್ಕಳ ಮುಂದೆ ಕ್ಷುಲ್ಲಕ ವಿಷಯಕ್ಕೂ ಕೈಯೊಡ್ಡಬೇಕಾದ ಪರಿಸ್ಥಿತಿಯಲ್ಲಿ ?? ದನ್ನು ನಿಬಾಯಿಸಿ ಬದುಕುವ ಹಳ್ಳಿಗನೊಬ್ಬನ ಜೀವನಗಾಥೆಯಿದೆ. ಕೆಲವೊಂದು ಹಳ್ಳಿಗಳಲ್ಲಿ ಇಂದಿಗೂ ಶೆಂದಿಯನ್ನು ತೆಗೆದು, ಮಾರುವ ದೃಶ್ಯವನ್ನು ಕಾಣುತ್ತೇವೆ. ?? ದೇ ದೃಶ್ಯ ಕೊಡಸೆಯವರ ಈ ಕೃತಿಯಲ್ಲಿ ಕೂಡ ಪಾತ್ರವೊಂದರ ?? ವಿಭಾಜ್ಯ ?? ಂಗದಂತೆ ಮೂಡಿಬಂದಿದೆ.


`?? ಪ್ಪನ ಪರಪಂಚ’ದಲ್ಲಿ, ?? ಪ್ಪ ರಾಜಕೀಯವನ್ನು ?? ನಿವಾರ್ಯವಾಗಿ ಪ್ರವೇಶಿಸುವುದು, ಬಿಳುಮನೆಯವರ `ಮಲೆಯ ಪ್ರಬಂಧಗಳು’ವಿನಲ್ಲಿ `ಶಾಂತವೇರಿ ಗೋಪಾಲಗೌಡರು- ನೆನಪುಗಳು’ ಪ್ರಬಂಧವನ್ನು ಮೆಲುಕು ಹಾಕುವಂತೆ ಮಾಡುತ್ತದೆ. ರಾಜಕೀಯದ ನಡುವೆ ಇಳಿವಯಸ್ಸಿನಲ್ಲಿಯೂ ಸಮಾಜಸೇವೆಗೆ ಟೊಂಕಕಟ್ಟಿ ನಿಲ್ಲುವ ಉತ್ಸಾಹ ?? ಪ್ಪನ ಪರಸೇವೆಯ ಪ್ರಪಂಚವಾಗಿಯು ಕಾಣಿಸುತ್ತದೆ. ಚುನಾವಣೆಯಲ್ಲಿ ಸೋತರೂ ಬತ್ತದ ಸಮಾಜಸೇವೆಯ ನಂಟು ರಿಪ್ಪನ್ ಪೇಟೆಯಲ್ಲಿರುವ ಸಮೂದಾಯ ವಿದ್ಯಾರ್ಥಿನಿಲಯದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಶಿಕ್ಷಣದ ಹಂಬಲದಲ್ಲಿರುವ ಮಕ್ಕಳ ಕಾಳಜಿಯನ್ನು ಹೊತ್ತುಕೊಂಡು ಪರಿಸ್ಥಿತಿಯನ್ನು ಎದುರಿಸುವುದು ಸುಲಭದ ಮಾತಲ್ಲವೆನ್ನುವುದು ಓದುಗನಿಗೆ ತಿಳಿಯುತ್ತದೆ.


ಇಷ್ಟೆಲ್ಲಾ ತಾಕತ್ತಿದ್ದರೂ ಮಕ್ಕಳು ಪ್ರಾಯಕ್ಕೆ ಬಂದಾಗ ?? ವರಿಗೆ ಜವಾಬ್ದಾರಿಯನ್ನು ಹೊರೆಸಿ, ಬದುಕಿನ ವ್ಯಾಪ್ತಿಯನ್ನು ತೆರೆದಿಡುವ ಉದ್ದೇಶವೇ ?? ವನಿಗೆ ಇದ್ದಿರಬಹುದೆಂದೆನಿಸುತ್ತದೆ. ಇಲ್ಲವಾದರೆ ಮಕ್ಕಳಿಗೆ ಆಯಾಯ ಸಂದರ್ಭದಲ್ಲಿ ಏನೇನು ಆಗಬೇಕೆಂದುಕೊಳ್ಳುತ್ತಾನೋ ?? ವುಗಳ ಜೊತೆಗೆ ?? ವರವರ ಜವಾಬ್ದಾರಿಯನ್ನು ಈ ಮೂಲಕ ಹೇಳುತ್ತಿರಬಹುದು. ?? ಷ್ಟೇ ?? ಲ್ಲದೆ, ಸರೀಕರ ಜೊತೆಗೆ `ಯಜಮಾನ’ ?? ನಿಸಿಕೊಂಡವನು ಬಾಂಧವ್ಯಗಳನ್ನು ಉಳಿಸಿಕೊಂಡು ಒಬ್ಬ `ರೋಲ್ ಮಾಡೆಲ್’ ಆಗಿ ಗೋಚರಿಸಿದರೂ ಹೆಚ್ಚಲ್ಲ. ಈ ರೀತಿಯ ಗೌರವಕ್ಕೆ ಪಾತ್ರವಾಗಬೇಕಾದರೆ ಆತನ ಕಾರ್ಯವೈಖರಿ, ಆದರ್ಶಗಳು ಇತರರಿಗೆ ಮಾದರಿಯಾಗಿರಬೇಕು. ಹಾಗಿನ ವ್ಯಕ್ತಿತ್ವ ಈ ಕೃತಿಯಲ್ಲಿ ಬರುವ ?? ಪ್ಪನದು. ಬೆನ್ನುಡಿಯಲ್ಲಿ ಸರ್ಜಾಶಂಕರ ಹರಳಿಮಠ ?? ವರು ಹೇಳುವಂತೆ, `ಇಲ್ಲಿ ?? ಪ್ಪನ ಬಗ್ಗೆ ಮಾತ್ರ ಹೇಳುತ್ತಿಲ್ಲ. ?? ಪ್ಪನ ಕಾಲಘಟ್ಟವನ್ನು ನಿಷ್ಠುರವಾಗಿ ಚಿತ್ರಿಸುವ ಕೃತಿ `?? ಪ್ಪನ ಪರಪಂಚ’.


ಮಕ್ಕಳ ಮನೆಯಲ್ಲಿ ಆರಾಮವಾಗಿ ಜೀವನ ನಡೆಸಬಹುದಾದ ?? ವಕಾಶಗಳಿದ್ದರೂ ?? ದು ?? ಸಹನೀಯವಾಗುವ ಸ್ಥಿತಿಯೇ ಒಬ್ಬನ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ?? ಂತಹ ಕ್ರಿಯಾಶೀಲತೆಯಿಂದಿರುವ ವ್ಯಕ್ತಿಯು ಪ್ರತೀ ಕೆಲಸದಲ್ಲಿಯೂ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾನೆ. ಹಾಗಾಗಿ ಇಲ್ಲಿಯ ?? ಪ್ಪ ತನ್ನದೇ ಆದ ಒಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಾನೆ.


ಮಕ್ಕಳಿಗೆ ರೋಲ್ ಮಾಡೆಲ್ ಆಗುವ ?? ಪ್ಪಂದಿರ ಬಗ್ಗೆ ಆಗಿನ ಕಾಲದಲ್ಲಿ ಏನನ್ನೂ ಗುರುತಿಸಲಾರದೆ, ಸ್ವತ: ತನಗೆ ಜವಾಬ್ದಾರಿಗಳ ಆಳದ ?? ರಿವಾದಾಗ ಮಗ, ?? ಪ್ಪನ ಕಾರ್ಯವೈಖರಿಯನ್ನು ಒಂದು `ಬೆರಗು’ ?? ನ್ನುವಂತೆ ಇಲ್ಲಿ ಕಾಣುತ್ತಾನೆ. ಆ ಬೆರಗು ?? ಸಹಾಯಕತೆಯಿಂದ ಪಾರ್ಶ್ವವಾಯು ಪೀಡಿತನಾಗಿ ಮಲಗಿದಾಗ ಕ್ರಿಯಾಶೀಲತೆಯ ಚುರುಕು ಜೀವವೊಂದನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವುದಕ್ಕೂ ಬೇಸರವಾಗುತ್ತದೆ. ಮುಂದೇ ?? ದು ಸಾವಿನಲ್ಲಿ ?? ಂತ್ಯ ಕಂಡಾಗ ?? ಪ್ಪನನ್ನು ನೋಡಲಾಗದ ?? ಸಹಾಯಕತೆಯಲ್ಲಿ ಉಳಿದು ಬಿಡುವ ಮಗನ ?? ಂತ:ಕರಣದ ಸೊಲ್ಲು ಮತ್ತು ?? ವನ ಆಶೆಗಳೆಲ್ಲಾ ದೂರ ಮಾಡಿಕೊಂಡ ನಿರ್ಲಿಪ್ತತೆ ಯಾರ ಮನಸ್ಸನಾದರೂ ಕಲಕದಿರದು. ಇನ್ನೊಂದು ಮನಕಲಕುವ ದೃಶ್ಯ, ಮಕ್ಕಳ ಒತ್ತಾಯಕ್ಕೆ ಹಸಿರು ಬಳೆ ತೊಟ್ಟು, ಕನಕಾಂಬರ ಮುಡಿಗೇರಿಸಿ, ಹಣೆಗೆ ಕುಂಕುಮವಿಟ್ಟು ಕಾರಿನತ್ತ ಹೆಜ್ಜೆ ಹಾಕುವ ತಾಯಿಯ ಸನ್ನಿವೇಶ ಓದುಗನ ಕಣ್ಣನ್ನು ಒದ್ದೆ ಮಾಡದಿರದು.


`?? ಪ್ಪನ ಪರಪಂಚ’ ಒಬ್ಬ ಆದರ್ಶ ಪ್ರಾಯ ತಂದೆಯ ಜೀವಿತ ಮತ್ತು ಆತನ ಸ್ವಾಭಿಮಾನದ, ಶಿಸ್ತಿನ ಬದುಕು ಎಲ್ಲರಿಗೂ ಮಾದರಿಯೆಂದರೆ ?? ತಿಶಯೋಕ್ತಿಯಲ್ಲ. ನಿಜವಾಗಿಯೂ ತಂದೆಯೊಬ್ಬ ಮಕ್ಕಳ ದೃಷ್ಟಿಯಲ್ಲಿ `ರಿಯಲ್ ಹೀರೋ’ ?? ಂದರೂ ತಪ್ಪಲ್ಲ. ಹಾಗಾಗಿ ಲಕ್ಷ್ಮಣ ಕೊಡಸೆ ?? ವರ ಈ ಕೃತಿ ಕೇವಲ ಒಂದು ಕುಟುಂಬದ ?? ಥವಾ ವರ್ಗದ ಓದುಗರಿಗೆ ಮಾತ್ರ ಸೀಮಿತವಲ್ಲ. ಸಹಜ ಬದುಕಿನ ಏರಿಳಿತಗಳು ಓದುಗರಿಗೂ ಆದರ್ಶಪ್ರಾಯವೆಂದೆನಿಸಬಹುದು. ಈ ಕೃತಿಯಲ್ಲಿ ಮನೋಹರ್ ?? ವರ ಮುಖಪುಟದ ಕಲೆ ಕೂಡ ಕೃತಿಯಷ್ಟೇ ಬಹಳ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.